ಮಗು, ತಾಯಿ ಮತ್ತು ಆರೋಗ್ಯ
ಮಕ್ಕಳ ಆರೋಗ್ಯ ಬಹು ಮುಖ್ಯ. ಅರೋಗ್ಯಕ್ಕೆ ಒಳ್ಳೆ ಗಾಳಿ, ಬೆಳಕು, ಆಹಾರ ಮತ್ತು ಮನೆಯಲ್ಲಿ ಎಲ್ಲರ ಪ್ರೀತಿ ಮುಖ್ಯ. ಹಸಿವಾದಾಗ ಆಹಾರವನ್ನು ಕೊಡಬೇಕು, ಸುಲಭವಾಗಿ ಜೀರ್ಣವಾಗುವ, ಇನ್ನೂ ಮಗು ತಿನ್ನಲು ಶಕ್ಯವಿದ್ದರೂ ಅತಿಯಾಗಿ ನೀಡಬಾರದು. ಪೌಷ್ಟಿಕ ಅಂಶಗಳು ಉಳ್ಳ ಸುಲಭವಾಗಿ ಜೀರ್ಣವಾಗುವ ಆಹಾರ ಕೊಡಬೇಕು. ಬೆಳಗ್ಗೆ ಸೂರ್ಯನ ಬಿಸಲಿನಲ್ಲಿ ಸ್ವಲ್ಪ ಆಟ ಆಡಬೇಕು. ಮಕ್ಕಳಿಗೆ ಸಾಮಾನ್ಯವಾಗಿ ಅನ್ನನಾಳ, ಶ್ವಾಸ ಕೋಶಗಳಿಗೆ ಸೋಂಕು ಉಂಟಾಗುವುದು. ಆದ್ದರಿಂದ ಪಾತ್ರೆ ಇತ್ಯಾದಿ ಗಳನ್ನು ಕುದಿಯುವ ನೀರಿನಲ್ಲಿ ಅದ್ದಬೇಕು. ಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಮಲ ವಿಸರ್ಜನೆ ನಂತರ, ಊಟ ಮಾಡುವ ಮೊದಲು ಸೋಪ್ ನಿಂದ ಸ್ವಚ್ಛತೆ ಮಾಡಿಕೊಳ್ಳಬೇಕು. ಕಾದಾರಿದ ನೀರಿನಿಂದ ಮೋಸುಂಬಿ ರಸ, ಒಣ ಉತ್ತತ್ತಿ ಹಣ್ಣು ಒಂದೆರಡು ಒಳ್ಳೇದು.6 ತಿಂಗಳ ನಂತರ ಶಿಶುಗಳಿಗೆ ತಾಯಿಯ ಎದೆಹಾಲು ಮತ್ತು ಚೆನ್ನಾಗಿ ಕಲಸಿದ ಅಥವಾ ಮೆತ್ತಗೆ ಮಾಡಿದ ಕುಟುಂಬದ ಆಹಾರ, ದಿನಕ್ಕೆ 3ರಿಂದ 4 ಬಾರಿ ಹಾಗು ಪ್ರತಿ ಊಟದ ನಡುವೆ ಏನಾದರೂ ತಿಂಡಿ ಅಗತ್ಯವಾಗುತ್ತದೆ. ಬೇರೆಬ...