ಮಗು, ತಾಯಿ ಮತ್ತು ಆರೋಗ್ಯ

     



                                                               ಮಕ್ಕಳ ಆರೋಗ್ಯ ಬಹು ಮುಖ್ಯ. ಅರೋಗ್ಯಕ್ಕೆ ಒಳ್ಳೆ ಗಾಳಿ, ಬೆಳಕು, ಆಹಾರ ಮತ್ತು ಮನೆಯಲ್ಲಿ ಎಲ್ಲರ ಪ್ರೀತಿ ಮುಖ್ಯ. ಹಸಿವಾದಾಗ ಆಹಾರವನ್ನು ಕೊಡಬೇಕು, ಸುಲಭವಾಗಿ  ಜೀರ್ಣವಾಗುವ, ಇನ್ನೂ ಮಗು ತಿನ್ನಲು ಶಕ್ಯವಿದ್ದರೂ ಅತಿಯಾಗಿ ನೀಡಬಾರದು. ಪೌಷ್ಟಿಕ ಅಂಶಗಳು ಉಳ್ಳ ಸುಲಭವಾಗಿ  ಜೀರ್ಣವಾಗುವ ಆಹಾರ ಕೊಡಬೇಕು. ಬೆಳಗ್ಗೆ ಸೂರ್ಯನ ಬಿಸಲಿನಲ್ಲಿ ಸ್ವಲ್ಪ ಆಟ ಆಡಬೇಕು. ಮಕ್ಕಳಿಗೆ ಸಾಮಾನ್ಯವಾಗಿ ಅನ್ನನಾಳ, ಶ್ವಾಸ ಕೋಶಗಳಿಗೆ ಸೋಂಕು ಉಂಟಾಗುವುದು. ಆದ್ದರಿಂದ ಪಾತ್ರೆ ಇತ್ಯಾದಿ ಗಳನ್ನು ಕುದಿಯುವ ನೀರಿನಲ್ಲಿ ಅದ್ದಬೇಕು. ಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಮಲ ವಿಸರ್ಜನೆ ನಂತರ, ಊಟ ಮಾಡುವ ಮೊದಲು ಸೋಪ್ ನಿಂದ ಸ್ವಚ್ಛತೆ ಮಾಡಿಕೊಳ್ಳಬೇಕು. ಕಾದಾರಿದ ನೀರಿನಿಂದ ಮೋಸುಂಬಿ ರಸ, ಒಣ ಉತ್ತತ್ತಿ ಹಣ್ಣು ಒಂದೆರಡು ಒಳ್ಳೇದು.6 ತಿಂಗಳ ನಂತರ ಶಿಶುಗಳಿಗೆ ತಾಯಿಯ ಎದೆಹಾಲು ಮತ್ತು ಚೆನ್ನಾಗಿ ಕಲಸಿದ ಅಥವಾ ಮೆತ್ತಗೆ ಮಾಡಿದ ಕುಟುಂಬದ ಆಹಾರ, ದಿನಕ್ಕೆ 3ರಿಂದ 4 ಬಾರಿ ಹಾಗು ಪ್ರತಿ ಊಟದ ನಡುವೆ ಏನಾದರೂ ತಿಂಡಿ ಅಗತ್ಯವಾಗುತ್ತದೆ.

ಬೇರೆಬೇರೆ ಬಣ್ಣದ ಪ್ರಾಕೃತಿಕ ಆಹಾರಗಳನ್ನು ಪ್ರತಿ ವಾರ ಸೇವಿಸುವುದು ಆರೋಗ್ಯಪೂರ್ಣ, ಸಂತುಲಿತ ಆಹಾರಕ್ರಮಕ್ಕೆ ಅತ್ಯುತ್ತಮ ಮಾರ್ಗ.

ಕೆಂಪು, ಹಳದಿ ಮತ್ತು ಹಸಿರು ಹಣ್ಣುಗಳು ಮತ್ತು ತರಕಾರಿಗಳಲ್ಲಿ ಸೂಕ್ಷ್ಮಪೌಷ್ಟಿಕಾಂಶಗಳು ಸಮೃದ್ಧವಾಗಿರುತ್ತವೆ. ಇವುಗಳು ಕಣ್ಣಿಗೆ ಕಾಣದಷ್ಟು ಚಿಕ್ಕದಾಗಿರುತ್ತವೆ, ಆದರೆ ನಮ್ಮ ದೇಹವನ್ನು ಬಲಶಾಲಿಯನ್ನಾಗಿಸುತ್ತವೆ.ಸೊಪ್ಪುಗಳು ಸಾಮಾನ್ಯವಾಗಿ ಶೀತ ವೀರ್ಯ ಹೊಂದಿದ್ದು ಬೆಳ್ಳುಳ್ಳಿ ಹಾಗೂ ಮೆಣಸು ಸೇರಿಸಿ ಪಲ್ಯ ಸಾರು ಮಾಡಬೇಕು. ತಾಯಿಯ ಆರೋಗ್ಯ ಚೆನ್ನಾಗಿದ್ದರೆ ಮಗುವೂ ಚೆನ್ನಾಗಿರುತ್ತದೆ. ತಾಯಿಯ ಹಾಲು ಸಂಪೂರ್ಣ ಆಹಾರ ಹೊಂದಿರುತ್ತದೆ. ಋತು ಹಾಗೂ ವಾತಾವರಣಕ್ಕೆತಕ್ಕದಾಗಿ,ಮಗುವಿನ ಆರೋಗ್ಯ ದೃಷ್ಟಿಯಿಂದ ತಾಯಿ ಸೂಕ್ತ ಆಹಾರವನ್ನು ಆಯ್ಕೆ ಮಾಡಿಕೊಳ್ಳಬೇಕು. ಮಗುವಿನ ಸರ್ವೋತ್ತಮ ಬೆಳವಣಿಗೆ ಮುಖ್ಯ. ನುಗ್ಗೆ ಸೊಪ್ಪು ಎಲ್ಲಾ ಅರೋಗ್ಯ ಪೂರಕ ಅಂಶಗಳನ್ನು ಹೊಂದಿದ್ದು ಸೇವಿಸಲು ಯೋಗ್ಯ ವಾಗಿದೆ. ಹೆಚ್ಚು ತರಕಾರಿಗಳ  ಸೇವನೆ ಒಳ್ಳೇದು.ಷಡ್ರಸೋಪೇತ (  रसाःस्वाद्वम्ललवणतिक्तॊषणकषायकाः।) ಆಹಾರ, ಮಧುರ ರಸ  ( ಉದಾಹರಣೆಗೆ:ಹಾಲು, ತುಪ್ಪ, ಬೆಲ್ಲ, ದ್ರಾಕ್ಷೆ, ಖರ್ಜೂರ, ಕುಂಬಳಕಾಯಿ, ಅಕ್ಕಿ, ಗೋಧಿ ಇತ್ಯಾದಿ, ಅಮ್ಲ ರಸ :ಹೇಳಿದರೆ ಹುಳಿ ರುಚಿ.

ಉದಾಹರಣೆಗೆ ಮಜ್ಜಿಗೆ, ಅಂಬಟೆ ಕಾಯಿ, ನೆಲ್ಲಿಕಾಯಿ, ಮಾದಳ ಫಲ, ಮಾವಿನ ಕಾಯಿ ಇತ್ಯಾದಿ, ಲವಣ .

ಲವಣ:-ಸೈಂಧವ, ಸೌವರ್ಚಲ, ವಿಡ, ಸಮುದ್ರ, ಕಾಲ ಲವಣ 

ಲವಣ ರಸ ಪಾಚನ ಕ್ರಿಯೆಗೆ ಸಹಾಯ ಮಾಡುತ್ತದೆ.ಇದಕ್ಕೆ ಕ್ಲೇದನ  ಮಾಡುವ ಗುಣ ಇದ್ದು, ದೀಪನ-ಪಾಚಕಾಗ್ನಿಯ ಉದ್ದೀಪನ ಮಾಡುತ್ತದೆ ,ಕಫವ ಕರಗಿಸುತ್ತದೆ. ತೀಕ್ಷ್ಣ, ಸರ ಗುಣ ಇದ್ದು ಹರಡುವುದು,  ಕಟುರಸ :ಖಾರ.ಉದಾಹರಣೆಗೆ ಶುಂಠಿ,ಮರಿಚ(ಮೆಣಸು),ಲಶುನ(ಬೆಳ್ಳುಳ್ಳಿ),ತುಳಸಿ,ಮೂತ್ರ,ಇಂಗು ಇತ್ಯಾದಿ.  ತಿಕ್ತರಸ:ಕಹಿ 

ಕಹಿಬೇವು,ಅರಿಶಿನ, ಶ್ರೀಗಂಧ, ಒಂದೆಲಗ, ಲಾವಂಚ, ಶಂಖಪುಷ್ಪ, ಜಾಜಿ, ಅರ್ಕ, ಬಜೆ, ಶತಾವರಿ ಇವುಗಳ ರಸ ತಿಕ್ತ ರಸದ ಗುಣ ಅರುಚಿ ನಾಶ ಮಾಡುವಂತದ್ದು, ವಿಷ ನಾಶಕ, ಕೃಮಿ ನಾಶಕ, ಮೂರ್ಛೆ, ಜ್ವರನಾಶಕ, ಅಗ್ನಿ ದೀಪಕ, ಪಾಚಕ, ಎದೆ ಹಾಲು ಶುದ್ದ ಮಾಡುವಂತಹದ್ದು,ಕಷಾಯ ರಸ : ಒಗರು,ಕಷಾಯ ರಸ ಉದಾಹರಣೆಗೆ ಅಶ್ವಥ,ಅತ್ತಿ ಇತ್ಯಾದಿ..

ಕಷಾಯ ರಸ ) ರಸಾಯನ ಲೇಹ್ಯ, ಜಾಠರಾಗ್ನಿಯನ್ನು ಸಮ ಸ್ಥಿತಿಯಲ್ಲಿ ಇಡುವಂತಹ ಆಹಾರ ಅತೀ ಮುಖ್ಯವಾಗಿರುತ್ತದೆ. ರೋಗದ ಮೂಲ ಕಾರಣ ಯಾವಾಗಲೂ ದೇಹದಲ್ಲಿನ ಅಂಶಗಳ ಅಸಮತೋಲನವಾಗಿದೆ. ದೇಹವು ಸಮತೋಲನದ ಸ್ಥಿತಿಯಲ್ಲಿದ್ದರೆ, ಯಾವುದೇ ಸೂಕ್ಷ್ಮಜೀವಿಗಳು, ಅತ್ಯಂತ ಅಪಾಯಕಾರಿ ಸಹ ರೋಗವನ್ನು ಉಂಟುಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ, ಸಾಂಕ್ರಾಮಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಾಗ, ತೊಂದರೆಗೊಳಗಾದ ಸಮತೋಲನವನ್ನು ಪುನಃಸ್ಥಾಪಿಸಲು ವೈದ್ಯರು ಪ್ರಯತ್ನಿಸುತ್ತಾರೆ: ದೇಹದ ಪ್ರತಿರೋಧವನ್ನು ಹೆಚ್ಚಿಸುವ ಮೂಲಕ ಸೂಕ್ಷ್ಮಜೀವಿಗಳ ನಾಶ ಸಂಭವಿಸುತ್ತದೆ.   

ಸಮಾಲೋಚನೆಗಳಿಗಾಗಿ, ಸಂಪರ್ಕ:                +91-9972831762, ಡಾ.ರಾಮಚಂದ್ರ.ಬಿ.ಎಚ್. ಬಿಎಎಂಎಸ್ (ಆಯುರ್ವೇದ  ಔಷಧ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ಪದವಿ), ಬಿಎಎಂಎಸ್ (ತುರ್ತು ಅಲೋಪತಿ ಔಷಧ), ಪಿಜಿಡಿವೈಎಸ್ (ಯೋಗ ವಿಜ್ಞಾನದಲ್ಲಿ ಸ್ನಾತಕೋತ್ತರ ಡಿಪ್ಲೊಮಾ). ನಿವೃತ್ತ ಜಿಲ್ಲಾ ಆಯುಷ್ ಅಧಿಕಾರಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಗರ್ಭಾಶಯದ ಫೈಬ್ರಾಯ್ಡ್‌ಗಳು (Uterine Fibroids) ಅಥವಾ ದೇಹದ ಯಾವುದೇ ಭಾಗದಲ್ಲಿ ಉಂಟಾಗುವ ಫೈಬ್ರಾಯ್ಡ್‌ಗಳನ್ನು ಆಯುರ್ವೇದ ಔಷಧಿಗಳ ಮೂಲಕ ಹಂತಾನುಸಾರವಾಗಿ ನಿರ್ವಹಿಸಬಹುದು ಮತ್ತು ಚಿಕಿತ್ಸೆ ನೀಡಬಹುದು.

ಆಹಾರ ಸೇವನೆಯ ವಿಧಿ ವಿಧಾನ

ಕಾರ್ಟಿಲ್ಯಾಜಿನಸ್ ಹಾನಿಗಳು ನಿಧಾನವಾಗಿರಬಹುದು ಅಥವಾ ಗಾಯಗಳಿಂದ ತುರ್ತಾಗಿ ಪರಿಣಾಮ ಬೀರಬಹುದು; ರೋಗಶಾಸ್ತ್ರೀಯ ಪ್ರಕ್ರಿಯೆಯಿಂದ ಆಯುರ್ವೇದವು ಉತ್ತಮ ಪರಿಹಾರವಾಗಿದೆ. ಕಾರ್ಟಿಲ್ಯಾಜಿನಸ್ ಜಾಯಿಂಟ್ಸ್ ಆದ ಮಂಡಿಯಲ್ಲಿ ಸ್ಟೀಲ್ ಜಾಯಿಂಟ್ ಅಳವಡಿಕೆಗಿಂತ ಮುಂಚಿತವಾಗಿ ಆಯುರ್ವೇದ ಚಿಕಿತ್ಸೆ ಪರಿಣಾಮಕಾರಿಯಾಗಬಲ್ಲದು!